== ಭಾರತದ ಮಹಿಳಾ ಹಾಕಿ ತಂಡ == (ಭಾರತದ ರಾಷ್ಟ್ರೀಯ ಹಾಕಿ ತಂಡ) ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಮಹಾರಾಜ್ ಕಿಶನ್ ಕೌಶಿಕ್. ನಾಯಕಿ ಮಮತಾ ಖರಾಬ್ ಮತ್ತು ಡ್ರ್ಯಾಗ್ ಫ್ಲಿಕ್ಕರ್ ಜಸ್ಜೀತ್ ಕೌರ್ == ಹಾಕಿ ಆಡುವ ಪ್ರಮುಖ ರಾಷ್ಟ್ರಗಳು == == ತಂಡದ ಪ್ರದರ್ಶನ == == ಭಾರತದ ಪುರುಷರ ಹಾಕಿ ತಂಡದ ಪ್ರದರ್ಶನ == ? |- === ಒಲಿಂಪಿಕ್ === |- ? == ಪದಕ ವಿಜೇತರು == ೧೯೨೮ರಿಂದ ೧೯೮೦ರವರೆಗಿನ ೧೨ ಕೂಟಗಳಲ್ಲಿ ಭಾರತವು ಹಾಕಿಯಲ್ಲಿ ೯ ಸ್ವರ್ಣ ಸೇರಿದಂತೆ ೧೧ ಪದಕಗಳನ್ನು ಗಳಿಸಿತ್ತು. ಸೂಚನೆ : ಮೇಲಿನ ಪಟ್ಟಿಯನ್ನು ಯಾವುದೇ ರೀತಿಯಲ್ಲೂ ಪುನರ್ಜೋಡಿಸಬಹುದು. ತಲೆಬರಹಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಗಳನ್ನು ಒತ್ತಿದಾಗ ಪಟ್ಟಿಯು ಬೇರೆ ರೀತಿಯಲ್ಲಿ ಜೋಡಣೆಗೊಳ್ಳುವುದು. == ೨೦೧೬/2016 ರ ದಕ್ಷಿಣ ಏಷ್ಯನ್‌ ಕ್ರೀಡೆಗಳು ಮತ್ತು ರಿಯೊ ಒಲಿಂಪಿಕ್ಸ್‌ == ಮುಂಬರುವ ರಿಯೊ ಒಲಿಂಪಿಕ್ಸ್‌ಗೆ ತಂಡವನ್ನು ಬಲ ಗೊಳಿಸುವ ಉದ್ದೇಶದಿಂದ ಹಾಕಿ ಇಂಡಿಯಾ (ಎಚ್‌ಐ) ದಕ್ಷಿಣ ಆಫ್ರಿಕಾ ಪ್ರವಾಸ ನಿಗದಿ ಮಾಡಿದೆ.ಮಿಡ್‌ಫೀಲ್ಡರ್‌ ರಿತು ರಾಣಿ ಪ್ರವಾಸದ ವೇಳೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಡಿಫೆಂಡರ್‌ ದೀಪಿಕಾ ಗೆ ಉಪನಾಯಕಿಯ ಜವಾಬ್ದಾರಿ ನೀಡಲಾಗಿದೆ. ಭಾರತ ಈ ಪ್ರವಾಸದ ವೇಳೆ ಜರ್ಮನಿ, ದಕ್ಷಿಣ ಆಫ್ರಿಕಾ ಮತ್ತು ಸ್ಕಾಟ್ಲೆಂಡ್‌ನ ರಾಷ್ಟ್ರೀಯ ತಂಡಗಳ ಎದುರು ತಲಾ ಎರಡು ಪಂದ್ಯಗಳನ್ನು ಆಡಲಿದೆ. ಜತೆಗೆ 21 ವರ್ಷ ದೊಳಗಿನವರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪೈಪೋಟಿ ನಡೆಸಲಿದೆ. ತಂಡ ಇಂತಿದೆ: ಗೋಲ್‌ಕೀಪರ್ಸ್‌: ಸವಿತಾ ರಾಣಿ, ರಜನಿ ಎತಿಮರ್ಪು ಮತ್ತು ಯೋಗಿತಾ ಬಾಲಿ. ಡಿಫೆಂಡರ್ಸ್‌: ದೀಪ್‌ ಗ್ರೇಸ್‌ ಎಕ್ಕಾ, ದೀಪಿಕಾ (ಉಪ ನಾಯಕಿ), ನಮಿತಾ ಟೊಪ್ಪೊ, ಜಸ್‌ಪ್ರೀತ್‌ ಕೌರ್‌, ಸುನಿತಾ ಲಾಕ್ರ, ಸುಶೀಲಾ ಚಾನು ಪುಖ್ರಾಂಬಮ್‌, ಗುರ್ಜಿತ್‌ ಕೌರ್‌ ಮತ್ತು ರಶ್ಮಿತಾ ಮಿಂಜ್‌. ಮಿಡ್‌ಫೀಲ್ಡರ್ಸ್‌: ರಿತು ರಾಣಿ (ನಾಯಕಿ), ಲಿಲಿಮಾ ಮಿಂಜ್‌, ನವಜೋತ್‌ ಕೌರ್‌, ನಿಯಾಲುಮ್‌ ಲಾಲ್‌ ರೌತ್‌ ಫೆಲಿ, ರೇಣುಕಾ ಯಾದವ್‌, ಲಿಲಿ ಚಾನು ಮಯೆಂಗ್‌ಬಮ್‌, ನರೀಂದರ್‌ ಕೌರ್‌, ನಿಕ್ಕಿ ಪ್ರಧಾನ್‌ ಮತ್ತು ಮನ್‌ಪ್ರೀತ್‌ ಕೌರ್‌. ಫಾರ್ವರ್ಡ್ಸ್‌: ರಾಣಿ ರಾಂಪಾಲ್‌, ಪೂನಮ್‌ ರಾಣಿ, ವಂದನಾ ಕಟಾರಿಯಾ, ಅನುರಾಧ ದೇವಿ ತೊಕೊಚೊಮ್‌, ಪ್ರೀತಿ ದುಬೇ ಮತ್ತು ನವಪ್ರೀತ್‌ ಕೌರ್‌.[೧] ತರಬೇತುದಾರ : ಆಸ್ಟ್ರೇಲಿಯಾ ಹಾಕಿ ಪಟು ನೀಲ್ ಹಾಗುಡ್ == ೨೦೧೬ ರ ಹೆಚ್ಚಿದ ನಿರೀಕ್ಷೆ == ಆಸ್ಟ್ರೇಲಿಯಾ, ನೆದರ್ಲೆಂಡ್ಸ್‌, ಅರ್ಜೆಂ ಟೀನಾ, ಮತ್ತು ನ್ಯೂಜಿ ಲೆಂಡ್‌, ಈ ಬಾರಿಯ ಒಲಿಂ ಪಿಕ್ಸ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ತಂಡಗಳೆಂಬ ಹಣೆಪಟ್ಟಿ ಹೊಂದಿವೆ. ಹಾಗಂತ ಭಾರತವನ್ನು ಕಡೆಗಣಿಸುವಂತಿಲ್ಲ. ಹಿಂದಿನ ಒಂದು ವರ್ಷದಲ್ಲಿ ನಡೆದ ಟೂರ್ನಿಗಳಲ್ಲಿ ರಿತು ಪಡೆಯಿಂದ ಮೂಡಿ ಬಂದಿರುವ ಸಾಮರ್ಥ್ಯ ತಂಡದ ಮೇಲೆ ನಿರೀಕ್ಷೆ ಇಡುವಂತೆ ಮಾಡಿದೆ. ಕಳೆದ ವರ್ಷದ ಆರಂಭದಲ್ಲಿ ನಡೆದ ಸ್ಪೇನ್‌ ಪ್ರವಾಸ, ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ ರೌಂಡ್‌–2 ಟೂರ್ನಿಗಳಲ್ಲಿ ಭಾರತ ತಂಡ ಜರ್ಮನಿ, ಆಸ್ಟ್ರೇಲಿಯಾದಂತಹ ಶಕ್ತಿಯುತ ತಂಡಗಳ ಎದುರು ಗೆದ್ದಿತ್ತು. ಜತೆಗೆ ಅರ್ಜೆಂಟೀನಾ ಪ್ರವಾಸದಲ್ಲಿಯೂ ಗಮನಾರ್ಹ ಸಾಮರ್ಥ್ಯ ತೋರಿತ್ತು. === ಹಾಗುಡ್‌ ಎಂಬ ಮಾಂತ್ರಿಕ === ಆಸ್ಟ್ರೇಲಿಯಾ ತಂಡದ ಹಾಕಿ ಮಾಂತ್ರಿಕ ನೀಲ್‌ ಹಾಗುಡ್‌ ಹೋದ ವರ್ಷ ಎರಡನೇ ಅವಧಿಗೆ ಮುಖ್ಯಕೋಚ್‌ ಆಗಿ ನೇಮಕಗೊಂಡ ಬಳಿಕ ತಂಡದ ಪ್ರದರ್ಶನ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. 2013ರಲ್ಲಿ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದ ಹಾಗುಡ್‌ ತಂಡದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದರು. ಅವರ ಮಾರ್ಗ ದರ್ಶನದಲ್ಲಿ ತಂಡ ಆ ವರ್ಷ ಹಾಕಿ ವಿಶ್ವ ಲೀಗ್‌ ರೌಂಡ್‌–2ರಲ್ಲಿ ಪ್ರಶಸ್ತಿ ಗೆದ್ದಿತ್ತು. ಜತೆಗೆ ಏಷ್ಯನ್‌ ಚಾಂಪಿ ಯನ್‌ಷಿಪ್‌ನಲ್ಲಿ ಕಂಚಿನ ಸಾಧನೆಯನ್ನು ಮಾಡಿತ್ತು. 2014ರಲ್ಲಿ ಕೆಲ ಕಾರಣಗಳಿಂದ ಹಾಗುಡ್‌ ತಮ್ಮ ಸ್ಥಾನ ತೊರೆದಿದ್ದರು. ಭಾರತ ತಂಡ ಒಲಿಂ ಪಿಕ್ಸ್‌ಗೆ ಅರ್ಹತೆ ಗಳಿಸಿದ ಬಳಿಕ ತನ್ನ ಪ್ರತಿಷ್ಠೆ ಯನ್ನು ಬದಿಗೊತ್ತಿದ ಹಾಕಿ ಇಂಡಿಯಾ ಆಸ್ಟ್ರೇಲಿ ಯಾದ ಮಾಜಿ ಆಟಗಾರನ ಮನವೊಲಿಸಿ ಮತ್ತೊಮ್ಮೆ ಅವರನ್ನು ಕೋಚ್‌ ಹುದ್ದೆಗೆ ತಂದು ಕೂರಿಸಿದೆ. ಅವರು ಬಂದ ಬಳಿಕ ತಂಡದ ಸಾಮರ್ಥ್ಯ ಏರುಗ ತಿಯಲ್ಲಿ ಸಾಗಿದೆ. ಇತ್ತೀಚೆಗೆ ನಡೆದ 12ನೇ ದಕ್ಷಿಣ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿರುವುದು ತಂಡದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಭಾರತ ತಂಡ ಮುಂಚೂಣಿ ಮತ್ತು ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಆದರೆ ಪೆನಾಲ್ಟಿ ಶೂಟೌಟ್‌ ನಲ್ಲಿ ಮುಗ್ಗರಿಸುತ್ತಿದೆ. ಹಿಂದಿನ ಕೆಲ ಪಂದ್ಯಗಳ ಫಲಿತಾಂಶ ಇದಕ್ಕೆ ನಿದರ್ಶನ. ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಈ ತಪ್ಪುಗಳನ್ನು ತಿದ್ದಿಕೊಂಡು ಸಾಗಬೇಕಾದ ಸವಾಲು ಈಗ ಭಾರತದ ಮಹಿಳಾತಂಡದ ಮುಂದಿದೆ. ‘ಒಲಿಂಪಿಕ್ಸ್‌ನಲ್ಲಿ ನಾವು ಜರ್ಮನಿ ತಂಡದ ಸವಾಲು ಎದುರಿಸಲಿದ್ದೇವೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ನಮಗೆ ಅಗ್ನಿ ಪರೀಕ್ಷೆ ಇದ್ದ ಹಾಗೆ. ಒಂದು ವೇಳೆ ನಾವು ಸೋತರೆ ಅದರಿಂದ ನಷ್ಟವೇನಿಲ್ಲ. ನಮ್ಮ ಲೋಪ ದೋಷಗಳನ್ನು ಅರಿತು ಅವುಗಳನ್ನು ತಿದ್ದಿಕೊಳ್ಳಲು ಈ ಪ್ರವಾಸ ನೆರವಾಗಲಿದೆ’ ಎಂದು ಹಾಗುಡ್‌ ಹೇಳಿದ್ದರು. == 2016ರ ತಂಡ == ದಹಲಿ,17 ಮಾರ್ಚ್ 2016: ಹಾಕಿ ಇಂಡಿಯಾ 8 ರಾಷ್ಟ್ರಗಳ ಆಹ್ವಾನಿತ ಹಾಕ್ ಬೇ ಕಪ್ 2016 ಭಾರತೀಯ ಮಹಿಳೆಯರ ತಂಡ: ತಂಡ(ಟೀಮು):ಫೋಟೋ:[] ಗೋಲ್' ಕೀಪರ್ಸ್ 1.ಅಸ್ಮಿತಾ , 2. ರಜನಿ ಇತಿಮರ್'ಪು(ರ್) , ರಕ್ಷಕರು ; 3. ಡೀಪ್ ಗ್ರೇಸ್ ಎಕ್ಕಾ , 4. ದೀಪಿಕಾ (ನಾಯಕ) , 5. ಸುನೀತಾ ಲಾಕ್ರ , 6. ಸುಶೀಲಾ ಚಾನು ಪುಕರಂಬಮ್() (ಉಪನಾಯಕ) , 7. ಎಚ್ ಲಾಲ್'ರುಆತ್'ಫೆಲಿ () , 8. ನಮಿತ ತೊಪ್ಪೊ (), 9. ನಿಕ್ಕಿ ಪ್ರಧಾನ್., (ಅನುರಾಧಾ ದೇವಿ ತೋಕ್‍ಚಮ್) (ಪೂನಮ್ ರಾಣಿ) (ವಂದನಾ ಕಟಾರಿಯಾ) (ರಾಣಿ) ಮಿಡ್'ಫೀಲ್ಡರ್ಸ್ ; 10. ಲಿಲಿಮಾ ಮಿನ್ಜ್ ( ), 11. ನವಜೋತ್ ಕೌರ್ , 12. ಮೊನಿಕಾ , 13. ಪ್ರೀತಿ ದುಬೆ. ಭಾರತೀಯ ಮಹಿಳಾ ತಂಡ, ಮುಂದೆ ಅತ್ಯಂತ ನಿರ್ಣಾಯಕ 2016 ರಿಯೊ ಒಲಿಂಪಿಕ್ಸ್' ಗುರಿಯಿಟ್ಟುಕೊಂಡು, ಪಂದ್ಯಾವಳಿಯಲ್ಲಿ ಒಂದು ಸುಧಾರಿತ ಪ್ರದರ್ಶನ ನೀಡಲು, ಮುಖ್ಯ ಕೋಚ್ ನೀಲ್ ಹಾಗುಡ್'(), ಅವರ ಜಾಗರೂಕ ಕಣ್ಣುಗಳ ಅಡಿಯಲ್ಲಿ, ಬೆಂಗಳೂರಿನಲ್ಲಿ ಕೇಂದ್ರದ ಶಿಬಿರದಲ್ಲಿ ಪ್ರಾಥಮಿಕ ತರಬೇತಿ ಪಡೆಯುತ್ತಿದೆ. == ಅಮೆರಿಕ ಪ್ರವಾಸದ ಹಾಕಿ ಸರಣಿ 2016 == ಅಮೆರಿಕ ಪ್ರವಾಸದ ಹಾಕಿ ಸರಣಿ; 2016 24 , 2016 ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡ 5–2 ಗೋಲುಗಳಿಂದ ಕೆನಡಾ ತಂಡವನ್ನು ಪರಾಭವಗೊಳಿಸಿತು. ಹಿಂದಿನ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು ಸೋಲಿಸಿ ಅದಕ್ಕೆ ಆಘಾತ ನೀಡಿದ್ದರು. ವಿರಾಮದ ವೇಳೆಗೆ ಉಭಯ ತಂಡಗಳು 1–1ರಲ್ಲಿ ಸಮಬಲ ಹೊಂದಿದ್ದವು. ವಂದನಾ 9 ಮತ್ತು 51, ದೀಪಿಕಾ 38 ಮತ್ತು 49ನೇ ನಿಮಿಷಗಳಲ್ಲಿ ಗೋಲು.9ನೇ ನಿಮಿಷದಲ್ಲಿ ವಂದನಾ ಕಟಾರಿಯಾ, ಫೀಲ್ಡ್‌ ಗೋಲು ಗಳಿಸಿ ತಂಡದ ಖಾತೆ ತೆರೆದರು.38ನೇ ನಿಮಿಷದಲ್ಲಿ ಭಾರತ ತಂಡದ ದೀಪಿಕಾರ ಗೋಲಿನಿಂದ ಮತ್ತೆ ಮುನ್ನಡೆ ಕಂಡುಕೊಂಡಿತು. 58ನೇ ನಿಮಿಷದಲ್ಲಿ ಪೂನಮ್‌ ರಾಣಿ ಗೋಲು ದಾಖಲಿಸುತ್ತಿದ್ದಂತೆ 5–2ರ ಜಯ ಲಭಿಸಿತು. == ೨೦೧೬ ರಿಯೊ ಒಲಂಪಿಕ್ಸಗೆ ಆಯ್ಕೆಯಾದವರು == ಮೂವತ್ತಾರು ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ವನಿತೆಯರ ಹಾಕಿ ತಂಡದ ನಾಯಕತ್ವವನ್ನು ಸುಶೀಲಾ ಚಾನು ವಹಿಸಲಿದ್ದಾರೆ.(ಈ ಮೊದಲು ನಾಯಕಿಯಾಗಿದ್ದ ರಿತು ರಾಣಿ ಬದಲಿಗೆ) ಭಾರತ ವನಿತೆಯರ ತಂಡವು 1980ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ನಂತರದ ಕೂಟಗಳಲ್ಲಿ ತಂಡಕ್ಕೆ ಅರ್ಹತೆ ಲಭಿಸಿರಲಿಲ್ಲ. ಕೋಚ್:ನೀಲ್‌ ಹಾಗುಡ್‌ ತಂಡದಲ್ಲಿ ನಾಯಕತ್ವ :ಸುಶೀಲಾ ಚಾನು ಡಿಫೆಂಡರ್‌ಗಳಾದ ದೀಪಿಕಾ, ಸುನಿತಾ ಲಕ್ರಾ, ಸುಶೀಲಾ, ನಮಿತಾ ಟೊಪ್ಪೊ, ದೀಪ್ ಗ್ರೇಸ್ ಎಕ್ಕಾ, ಮಿಡ್‌ಫೀಲ್ಡರ್‌ಗಳಾದ ರೇಣುಕಾ ಲಿಮಾ ಮಿಂಜ್, ಮೋನಿಕಾ, ನವಜ್ಯೋತ್ ಕೌರ್, ನಿಕ್ಕಿ ಪ್ರಧಾನ್, ಫಾರ್ವರ್ಡ್‌ ಆಟಗಾರ್ತಿಯರಾದ ರಾಣಿ ರಾಮಪಾಲ್, ಪೂನಮ್ ರಾಣಿ, ವಂದನಾ ಕಟಾರಿಯಾ, ಅನುರಾಧಾ ದೇವಿ, ಪ್ರೀತಿ ದುಬೆ ಗೋಲ್‌ಕೀಪರ್ ಸವಿತಾ ಪುನಿಯಾ. ಸ್ಥಾನ ಪಡೆದಿದ್ದಾರೆ. ಕಾಯ್ದಿಟ್ಟ ಆಟಗಾರ್ತಿಯರು:ರಜನಿ ಎಟಿಮ್ಮರ್ಪು;ನಿಯಲಮ್ ಲಾಲ್| :(ತೊಕೊಚೊಮ್?), ಡಿಫೆಂಡರ್ (ರಾವತ್ ಫೆಲಿ?) === ೨೦೧೬ ರಿಯೋಗೆ ಆಯ್ಕೆಯಾದ ವನಿತೆಯರ ಹಾಕಿ ತಂಡ === ಮೂವತ್ತಾರು ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ವನಿತೆಯರ ಹಾಕಿ ತಂಡದ ನಾಯಕತ್ವವನ್ನು ಸುಶೀಲಾ ಚಾನು ವಹಿಸಲಿದ್ದಾರೆ.(ಈ ಮೊದಲು ನಾಯಕಿಯಾಗಿದ್ದ ರಿತು ರಾಣಿ ಬದಲಿಗೆ) ಭಾರತ ವನಿತೆಯರ ತಂಡವು 1980ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ನಂತರದ ಕೂಟಗಳಲ್ಲಿ ತಂಡಕ್ಕೆ ಅರ್ಹತೆ ಲಭಿಸಿರಲಿಲ್ಲ. ಮುಖ್ಯ ತರಬೇತುದಾರ:ನೀಲ್‌ ಹಾಗುಡ್‌ ತಂಡದಲ್ಲಿ == 4ನೇ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ೨೦೧೬ == ಗುಂಪು ವಿಭಾಗದಲ್ಲಿ ಭಾರತ ಮಹಿಳೆಯರ ತಂಡ 2–0 ಗೋಲು ಗಳಿಂದ ಮಲೇಷ್ಯಾ ತಂಡವನ್ನು ಮಣಿಸಿದೆ. ಈ ಗೆಲುವಿನಿಂದ ಭಾರತ ತಂಡ ಏಳು ಪಾಯಿಂಟ್ಸ್‌ಗಳೊಂದಿಗೆ ಪಟ್ಟಿ ಯಲ್ಲಿ ಅಗ್ರಸ್ಥಾನ ಪಡೆದು ಕೊಂಡಿದೆ. ಕೊರಿಯಾ, ಚೀನಾ, ಜಪಾನ್‌ ಮತ್ತು ಮಲೇಷ್ಯಾ ತಂಡಗಳು ನಂತರದ ಸ್ಥಾನದಲ್ಲಿವೆ. ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆದಿದ್ದರಿಂದ ಭಾರತ ತಂಡದ ನಾಕೌಟ್‌ ತಲುಪುವ ಕನಸು ನನಸಾಗಿದೆ. ಭಾರತಕ್ಕೆ ಚಾಂಪಿಯನ್ ಟ್ರೋಫಿ: ಭಾರತ ಟೀಮು:1.ನವಜೋತ್ ಕೌರ್; 2.ದೀಪ್ ಗ್ರೇಸಿ ಎಕ್ಕಾ; 3.ಮೋನಿಕಾ; 4. ನಿಕ್ಕಿ ಪ್ರಧಾನ್; 5. ಅನುರಾಧಾ ದೇವಿ ತೋಕ್‍ಚಮ್; 6. ರಜನಿ ಇತಿಮರ್'ಪು(ರ್); 7. ಪೂನಮ್ ರಾಣಿ; 8. ವಂದನಾ ಕಟಾರಿಯಾ (); 9. ದೀಪಿಕಾ (ನಾಯಕ); 10. ಸುನೀತಾ ಲಾಕ್ರ;11. ರಾಣಿ. ಚೀನಾ ಟೀಮು:1.ಔಜೂಕ್ಸಿಯಾ; 2.ಷಾನ್ ಜೂ (ಸೆಂ); 3.ಜಾಂಗ್ ಇಂಗ್ ; 4.ಗುವೊ ಕಿಯು; 5.ಜೋವು ಯು; 6.ಚೆನ್ ಯಾಂಗ್; 7.ಯಾನ್ ಮೆಂಗ್; 8.ಜೋಂಗ್ ಮೆಂಗ್ ಲಿಂಗ್; 9.ಜಾಂಗ್ ಜಿಯಾಕಿ; 10.ತಾಂಗ್ ವಾಂಗ‌ಲಿ; 11.ಯೂ ಯಾರನ್ (ಗೋ.ಕೀ.) ಭಾರತ ಶನಿವಾರ ಸಿಂಗಪುರದಲ್ಲಿ 'ಮಹಿಳೆಯರ 4ನೇ ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಪಂದ್ಯಾವಳಿ' ಫೈನಲ್‍ನಲ್ಲಿ ಚೀನಾ ಮೇಲೆ 2-1 ಜಯ ಸಾಧಿಸಿದರು. ದೀಪಿಕಾ ಆಟಗಾರ್ತಿ ಅಂತಿಮ ಕೇವಲ 20 ಸೆಕೆಂಡುಗಳ ಸಮಯದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಒಂದು ಬಿರುಸು ಹೊಡೆತದಿಂದ ಗೋಲುಮಾಡಿ ಜಯ ತಂದಿತ್ತರು. ಭಾರತದವರು ಮೊದಲ ಕಾಲುಭಾಗದಲ್ಲಿ ಒಂದು ಪೆನಾಲ್ಟಿ ಕಾರ್ನರ್ ಮೂಲಕ ದೀಪ್ ಗ್ರೇಸ್ ಎಕ್ಕಾರ 13 ನೇ ನಿಮಿಷದ ಗೋಲಿನಲ್ಲಿ 1-0 ಮುನ್ನಡೆ ಪಡೆದರು; ನಂತರ ಚೀನಾದವರು ಒಂದುಗೋಲು ಮಾಡಿ ಸಮ ಮಾಡಿಕೊಂಡರು.ದೀಪಿಕಾರ ಅಂತಿಮ ಕ್ಷಣದ ಗೋಲು ಜಯ ತಂದಿತ್ತಿತು == ವಾಂಕೊವರ್‌ ವಿಶ್ವ ಲೀಗ್‌ ಮಹಿಳಾ ಹಾಕಿ ೨೦೧೭ == 24 , 2017 ಏಪ್ರಿಲ್ ಒಂದರಿಂದ ಆರಂಭವಾಗಲಿರುವ ಮಹಿಳೆಯರ ಎರಡನೇ ಸುತ್ತಿನ ವಿಶ್ವ ಲೀಗ್‌ನಲ್ಲಿ ಪಾಲ್ಗೊಳ್ಳಲು ಭಾರತ ಹಾಕಿ ತಂಡ ದಿ.೨೩, ಗುರುವಾರ ವೆಸ್ಟ್‌ ವಾಂಕೊವರ್‌ಗೆ ಪ್ರಯಾಣ ಬೆಳೆಸಿದೆ. ಭಾರತ ತಂಡ ಈ ಟೂರ್ನಿಯಲ್ಲಿ ಕೆನಡಾ, ಮೆಕ್ಸಿಕೊ, ಬೆಲಾರಸ್‌, ಟ್ರಿನಿಡಾಡ್, ಟೊಬ್ಯಾಗೊ, ಚಿಲಿ ಮತ್ತು ಉರುಗ್ವೆಯ ವಿರುದ್ಧ ಆಡಲಿದೆ. ನಾಯಕಿ:ರಾಣಿ ಉಪನಾಯಕಿ: ದೀಪ್ ಗ್ರೇಸ್ ಎಕ್ಕಾ; ತರಬೇತುದಾರ:ಎಸ್‍ಜೊಅರ್ಡ ಮರಿನೆ;( ) ತಂಡ ಇಂತಿದೆ: ಗೋಲ್‌ಕೀಪರ್‌: ಸವಿತಾ, ರಜನಿ, ಇತಿಮರ್ಪು. ಡಿಫೆಂಡರ್: ದೀಪ್‌ ಗ್ರೇಸ್ ಎಕ್ಕಾ, ಸುನಿತಾ ಲಾಕ್ರಾ, ಗುರ್ಜಿತ್ ಕೌರ್, ರೇಣುಕಾ ಯಾದವ್, ಮಾಲ್‌ಉನ್ಮವಿ. ಮಿಡ್‌ಫೀಲ್ಡರ್‌: ದೀಪಿಕಾ, ನವ್‌ಜೋತ್ ಕೌರ್, ರಿತು ರಾಣಿ, ಮೋನಿಕಾ, ಲಿಲಿ ಚಾನು, ನಮಿತಾ ಟೊಪ್ಪೊ. ಫಾವರ್ಡ್‌: ರಾಣಿ, ವಂದನಾ ಕಠಾರಿಯಾ, ಪೂನಮ್ ರಾಣಿ, ಸೋನಿಕಾ, ಅನುಪಾ ಬಾರ್ಲಾ. === ವನಿತೆಯರ ವಿಶ್ವ ಹಾಕಿ ಲೀಗ್ 2017 === 27 2017 ವೆಸ್ಟ್ ವ್ಯಾಂಕೋವರ್: ಮಹಿಳಾ ಹಾಕಿ ವಿಶ್ವ ಲೀಗ್ ನ ಎರಡನೇ ಸುತ್ತಿನ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಕೆನಡಾ ವಿರುದ್ಧ ೧-೩ ಅಂತರಲ್ಲಿ ಪರಾಭವಗೊಂಡಿದೆ. 02 2017 ವನಿತೆಯರ ವಿಶ್ವ ಹಾಕಿ ಲೀಗ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ಹೊಡೆಯುವ ಮೂಲಕ 4-2 ಅಂತರದಿಂದ ಉರುಗ್ವೆ ತಂಡವನ್ನು ಮಣಿಸಿ ಲೀಗ್ ರೌಂಡ್-2ರಲ್ಲಿ ಶುಭಾರಂಭ ಮಾಡಿದೆ. === ಎರಡನೇ ಸುತ್ತಿನ ಪಂದ್ಯದಲ್ಲಿ ಸತತ ಎರಡನೇ ಗೆಲುವು === 4 , 2017; ವೆಸ್ಟ್‌ ವಾಂಕೋವರ್: ವಂದನಾ ಕಟಾರಿಯಾ ಗಳಿಸಿದ ಸೊಗಸಾದ ಗೋಲಿನ ನೆರವಿನಿಂದಾಗಿ ಭಾರತ ತಂಡ ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಹಾಕಿ ಲೀಗ್‌ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ 1-0 ದಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಉರುಗ್ವೆ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ಪಡೆದಿತ್ತು. ಗೋಲು ಗಳಿಸಲು ಮೊದಲ ಕ್ವಾರ್ಟರ್‌ನಿಂದಲೇ ಉಭಯ ತಂಡಗಳು ಕಠಿಣ ಹೋರಾಟ ನಡೆಸಿದವು. ಆದರೆ ಫಲ ಲಭಿಸಿದ್ದು 26ನೇ ನಿಮಿಷದಲ್ಲಿ. ಗುಂಪಿನಲ್ಲಿ ಒಟ್ಟು ಮೂರು ತಂಡಗಳಿದ್ದು ಎರಡು ಪಂದ್ಯಗಳಲ್ಲಿ ಜಯ ಪಡೆದಿರುವ ಕಾರಣ ಭಾರತ ಸೆಮಿಫೈನಲ್ ಪ್ರವೇಶಿಸಿದೆ === ವಿಶ್ವ ಹಾಕಿ ಲೀಗ್‌ ರೌಂಡ್‌ 2 === 11 , 2017; ಭಾರತ ತಂಡ ಇಲ್ಲಿ ನಡೆದ ವಿಶ್ವ ಹಾಕಿ ಲೀಗ್‌ ರೌಂಡ್‌–2 ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿಯಿತು. ಸೋಮವಾರ ನಡೆದ ಫೈನಲ್‍ನಲ್ಲಿ ಶೂಟೌಟ್‌ನಲ್ಲಿ ಭಾರತ ತಂಡ 3–1 ಗೋಲುಗಳಿಂದ ಬಲಿಷ್ಠ ಚಿಲಿ ತಂಡವನ್ನು ಸೋಲಿಸಿತು. ಇದರಿಂದ ಭಾರತ ವಿಶ್ವಲೀಗ್ ಆಡಲು ಸೆಮಿಫೈನಲ್ಸ್ ಅರ್ಹತೆ ಪಡೆದಿದೆ. ದೀಪಿಕಾ 200 ಪಂದ್ಯಗಳ ಸಾಧನೆ; ಮಿಡ್‌ಫೀಲ್ಡರ್‌ ಆಟಗಾರ್ತಿ ದೀಪಿಕಾ, ಚಿಲಿ ತಂಡದ ವಿರುದ್ಧ ಆಡುವ ಮೂಲಕ ‘ದ್ವಿಶತಕ’ ಬಾರಿಸಿದ ಕೀರ್ತಿಗೆ ಪಾತ್ರರಾದರು. ಇದು ಅವರಿಗೆ 200ನೇ ಅಂತರ ರಾಷ್ಟ್ರೀಯ ಪಂದ್ಯ. == 18 ವರ್ಷದೊಳಗಿನವರ ಏಷ್ಯಾ ಕಪ್‌ ಹಾಕಿ ಟೂರ್ನಿ ೨೦೧೬ == 18 , 2016 ಭಾರತದ ಮಹಿಳೆಯರ ತಂಡ ಬ್ಯಾಂಕಾಕ್‍ನಲ್ಲಿ ನಡೆಯುತ್ತಿ ರುವ 18 ವರ್ಷದೊಳಗಿನವರ ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಶನಿವಾರ ಎರಡನೇ ಗೆಲುವು ದಾಖಲಿಸಿದೆ. ಚೀನಾ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತ ತಂಡ 3–2ಗೋಲುಗಳಲ್ಲಿ ಜಯಗಳಿಸಿದೆ. == ಭಾರತದ ಮಹಿಳಾ ಹಾಕಿ ೨೦೧೫ == 2015ರಲ್ಲಿ ಭಾರತದ ಸಾಧನೆ ==== ವಿಶ್ವ ಹಾಕಿ ಲೀಗ್ ರೌಂಡ್ ನವದೆಹಲಿ 2015 ==== 2015ರಲ್ಲಿ ಭಾರತದ ಸಾಧನೆ ==== ಹೌಕಸ್ ಬೇಕಪ್ ನ್ಯೂಜಿಲೆಂಡ್ ==== 2015ರಲ್ಲಿ ಭಾರತದ ಸಾಧನೆ ==== ಹಾಕಿ ವಿಶ್ವಲೀಗ್ ಸೆಮಿಫೈನಲ್ಸ್ ಬೆಲ್ಜಿಯಮ್ ==== 2015ರಲ್ಲಿ ಭಾರತದ ಸಾಧನೆ ==== ಅರ್ಜೆಂಟೈನಾ ಪ್ರವಾಸ ==== 2015ರಲ್ಲಿ ಭಾರತದ ಸಾಧನೆ ==== ಭಾರತದ ಪ್ರಮುಖ ಆಟಗಾರ್ತಿಯರ ಸಾಧನೆ ==== 2015ರಲ್ಲಿ ಭಾರತದ ಪ್ರಮುಖ ಆಟಗಾರ್ತಿಯರ ಸಾಧನೆ == ಪದಕದ ಇತಿಹಾಸ == ಟೂರ್ನಮೆಂಟ್ ಇತಿಹಾಸ (ಇಂ.ವಿಕಿಯಿಂದ) == ಪದ್ಮಶ್ರೀ ಪ್ರಶಸ್ತಿ == == ದ್ಯಾನ್ ಚಂದ ಪ್ರಶಸ್ತಿ == == ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ == == ಅರ್ಜುನ ಪ್ರಶಸ್ತಿ == == ಚಿತ್ರ ಗ್ಯಾಲರಿ == == ಸಂಪರ್ಕ == ಹಾಕಿ ಭಾರತದ ಪುರುಷರ ಹಾಕಿ ತಂಡ ಪ್ರೊ ಕಬಡ್ಡಿ ಲೀಗ್ ರಿಯೊ ಒಲಿಂಪಿಕ್ಸ್ 2016 ಭಾರತದ ಅತ್ಲೆಟಿಕ್ಸ್‍ ೨೦೧೬ ರಿಯೊ ಒಲಿಂಪಿಕ್ಸ್ 2016ರಲ್ಲಿ ಭಾರತ == ಉಲ್ಲೇಖ == ೧...//ಭಾರತ-ಹಾಕಿ-ತಂಡಕ್ಕೆ-ರಿತು-ರಾಣಿ-ನಾಯಕಿ[[೧]] == ಬಾಹ್ಯ ಸಂಪರ್ಕಗಳು == ಇಂಡಿಯನ್ ಹಾಕಿ ಡಾಟ್ ಕಾಂ ಭಾರತೀಯ ಹಾಕಿ ಡಾಟ್ ಆರ್ಗ್ .. 2010-01-14 ವೇಬ್ಯಾಕ್ ಮೆಷಿನ್ ನಲ್ಲಿ.